Author: Team Kudla City

ಮಂಗಳೂರಿನ ಚರ್ಚ್ ಗಳಲ್ಲೂ ಅನ್ನದಾನ !

ಮಂಗಳೂರಿಗೆ ಬಂದು ಊಟಕ್ಕೆ ಹಣ ಇಲ್ಲಹೊಟ್ಟೆಯಲ್ಲಿ ಕೂರಬೇಕಿಲ್ಲ. ಮಂಗಳೂರಿನ ಕದ್ರಿ, ಕುದ್ರೋಳಿ, ಕಟೀಲು, ಸುಂಕದಕಟ್ಟೆ ದೇವಳದಲ್ಲಿ ಭಕ್ತಾದಿಗಳಿಗೆ ಮಧ್ಯಾಹ್ನ ಉಚಿತ ಊಟ(ದೇವರ ಪ್ರಸಾದ)ದ ವ್ಯವಸ್ಥೆ ಇರುತ್ತದೆ. ಅದರಲ್ಲೂ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲೂ ಇಂತಹ ಅನ್ನದಾನದ ಕಲ್ಪನೆಯನ್ನು ಆಳವಡಿಸಿಕೊಂಡಿದ್ದಾರೆ.

ದಿನನಿತ್ಯದ ಊಟದ ವ್ಯವಸ್ಥೆ ಇಲ್ಲದೇ ಇದ್ದರೂ ಕೂಡ ಕೆಲವೊಂದು ವಿಶೇಷ ದಿನಗಳಲ್ಲಿ ಅನ್ನದಾನದ ವ್ಯವಸ್ಥೆಯಿದೆ. ಮಂಗಳೂರಿನ ಕೆಲವೊಂದು ಕ್ರೈಸ್ತ ಧರ್ಮದ ಪುಣ್ಯಕ್ಷೇತ್ರಗಳಾದ ಮುಡಿಪು ಸಂತ ಜೋಸೆಫ್( ಶುಕ್ರವಾರ), ಪಕ್ಷಿಕೆರೆ ಸಂತ ಜೂದ್(ಮಂಗಳವಾರ) ಬೋಂದೆಲ್ ಸಂತ ಲಾರೆನ್ಸ್ (ಮಂಗಳವಾರ), ಅಲಂಗಾರು ಬಾಲಯೇಸು ಮಂದಿರ( ಶುಕ್ರವಾರ), ಬಿಕರ್ನಕಟ್ಟೆ ಬಾಲಯೇಸು ಮಂದಿರ (ಗುರುವಾರ) ದೇವರ ಪ್ರಸಾದ(ಅನ್ನದಾನ)ದ ವ್ಯವಸ್ಥೆ ಇರುತ್ತದೆ.

ಕುಡ್ಲದ ಮಳೆಗೆ‌ ಮೂರನೇ ದಿನನೂ ರಜೆ !

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಹಾಗೂ ಪ್ರವಾಹ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ಆ.9ರಂದು ಕೂಡಾ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲು ರಜೆ ಘೋಷಿಸಲಾಗಿದೆ.

ಕುಡ್ಲದಲ್ಲಿ ವಿಶಿಷ್ಟ ಮದ್ಮಲ್ ಫಿಶ್ !

ಮದ್ಮಲ್ ಎಂದರೆ ಮದುಮಗಳು ಎನ್ನುವ ಅರ್ಥ ತುಳು ಭಾಷೆಯಲ್ಲಿ ಹೇಳಲಾಗುತ್ತದೆ. ಇದು ಕುಡ್ಲದಲ್ಲಿ ಈ ಸೀಸನ್ ನಲ್ಲಿ ಕಾಣ ಸಿಗುವ ವಿಶಿಷ್ಟವಾದ ಮೀನು.
ಈಗ ಯಾವುದೇ ಹೋಟೆಲ್ ನಲ್ಲಿ ಫಿಶ್ ಪ್ರೈ ಕೇಳಿದ್ರೆ ಇದೇ ಮದ್ಮಲ್ ವಿಚಾರವನ್ನು ಹೇಳುತ್ತಾರೆ. ಕೊಂಚ ಸಿಹಿ ಜತೆಗೆ ಸುಂದರವಾದ‌‌ ಮೀನು ಇದು ಅದಕ್ಕೂ ಮುಖ್ಯ ತುಳುವರು ಶೋಧನೆ ಮಾಡಿದ ಮೀನು ಎನ್ನುವ ಹೆಗ್ಗಳಿಕೆ ಜತೆಗಿದೆ.

ಸುಷ್ಮಾ ಸ್ವರಾಜ್ ಮತ್ತು ಕುಡ್ಲದ ಮಲ್ಲಿಗೆ !

ಬಿಜೆಪಿ ನಾಯಕಿ ದಿ.ಸುಷ್ಮಾ ಸ್ವರಾಜ್ ಸಾಕಷ್ಟು ಬಾರಿ ಮಂಗಳೂರು ಸೇರಿದಂತೆ ಕರಾವಳಿಯ ಉಡುಪಿಗೂ ಬಂದಿದ್ದಾರೆ. ವಿಶೇಷ ಎಂದರೆ ಪ್ರತಿ ಸಾರಿನೂ ಬರುವಾಗ ಅವರಿಗೆ‌‌ ಕರಾವಳಿಯ ಅವರ ಅಭಿಮಾನಿಗಳು ಪ್ರೀತಿಯಿಂದ ಮಲ್ಲಿಗೆ‌ ನೀಡಲಾಗುತ್ತಿತ್ತು. ಅವರು ಅಷ್ಟೇ ಪ್ರೀತಿಯಿಂದ ಸ್ವೀಕಾರ‌‌ ಮಾಡಿ ತಲೆಗೆ‌ ಇಟ್ಟು‌ಬಿಡುತ್ತಿದ್ದರು. ಮಲ್ಲಿಗೆ ಸೂಸುವ ಪರಿಮಳದಿಂದ ಮತ್ತಷ್ಟು ಹುರುಪು ಅವರಲ್ಲಿ ಬಂದು ಬಿಡುತ್ತಿತ್ತು ಎನ್ನುವ ಮಾತನ್ನು ಅವರ ಅಭಿಮಾನಿ ಗಳು ಹೇಳುತ್ತಾರೆ.

ಕುಡ್ಲದ ಮಳೆಗೆ ಮತ್ತೆ ಶಾಲೆ,ಕಾಲೇಜಿಗೆ ರಜೆ

ಕರ್ನಾಟಕ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ಆ.8ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಪ್ರವಾಸಿಗರು ಹಾಕರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಿ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕಿಸಬಹುದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.