Author: Team Kudla City

ಮಂಗಳಾದೇವಿ ಅಮ್ಮನ ಸುಂದರ ಮೆರವಣಿಗೆ

ಮಂಗಳೂರಿನ ಬೋಳಾರ ಮಹತೋಭಾರ ಶ್ರೀಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವದ ಮಂಗಳಾದೇವಿಯ ಉತ್ಸವ ಮೂರ್ತಿಯ ಶೋಭಾಯಾತ್ರೆಯನ್ನು ಕಣ್ಣಾರೆ ನೋಡುವ ಭಾಗ್ಯವೇ ಒಂದು ವಿಶಿಷ್ಟ. ನವರಾತ್ರಿ ಸಮಯದಲ್ಲಿ ಇಲ್ಲಿ ನಡೆಯುವ ರಥೋತ್ಸವವಂತೂ ಕರಾವಳಿಯ ದೇವಳಗಳಲ್ಲಿ ಸಿಗುವುದೇ ಅಪರೂಪ. ಅಂದಹಾಗೆ ಮಂಗಳೂರು ಹೆಸರಿನ ಹಿಂದಿನ ಶಕ್ತಿಯೇ ಮಂಗಳಾದೇವಿ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ.

ಕುಡ್ಲದಲ್ಲಿ ಹಸಿರು ಶಾರದೆಯ ಸೊಬಗು

ಹಸಿರು ಶಾರದೆ ಎನ್ನುವ ಕಲ್ಪನೆಯೇ ಬಹಳ ಅಪರೂಪ. ಜಾಗತಿಕ ಮಟ್ಟದಲ್ಲಿ ಹಸಿರು ಉಳಿಸಲು ಹೋರಾಟ ನಡೆಯುತ್ತಿದ್ದಾಗ ಮಂಗಳೂರಿನ ಪಡೀಲ್ ಕರ್ಮಾರ್‌ನಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿಯವರು ಈ ಬಾರಿ ತಮ್ಮ ಶಾರದೆ ಮಾತೆಯನ್ನು ಹಸಿರೀಕರಣದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ.
ಶಾರದಾ ಮಾತೆಯ ಮೂರ್ತಿಯ ಅಸುಪಾಸಿನಲ್ಲಿ ವಿಶೇಷವಾದ ಗಿಡಗಳನ್ನು ಇಡುವ ಜತೆಯಲ್ಲಿ ಭಕ್ತರಿಗೂ ಹಸಿರಿನ ಕುರಿತು ಜಾಗೃತಿ, ಮಾಹಿತಿಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಪೂರ್ತಿಯಾಗಿ ಶಾರದಾ ಮಾತೆಯ ವೇದಿಕೆಯ ತುಂಬಾ ಹಸಿರಿನ ತೋರಣ, ಚಪ್ಪರ ಎಲ್ಲವೂ ಭಕ್ತರಿಗೆ ಹೊಸ ಅನುಭವವನ್ನು ನೀಡಬಲ್ಲದು.

ಒಂದೇ ದಿನದಲ್ಲಿ ಕೋಟಿ ಗಳಿಸಿದ ಸುಳ್ಯದ ಹುಡುಗ

ಸುಳ್ಯದ ಯುವಕನೋರ್ವನಿಗೆ ಅದೃಷ್ಟದ ಬಾಗಿಲು ತೆರೆದಿದ್ದು, 12 ಮಿಲಿಯನ್ ದಿರ್ಹಂ (ಸುಮಾರು 23 ಕೋಟಿ) ಅಬುದಾಬಿ ಲಾಟರಿಯ ಪ್ರಥಮ ಬಹುಮಾನ ಲಭಿಸಿದೆ.
ಉದ್ಯಾನ ನಗರಿ ಮುಂಬೈನ ಕಂಪನಿಯೊಂದರಲ್ಲಿ ಅಕೌಂಟೆಂಟ್ ಅಗಿರುವ ಸುಳ್ಯದ ಜಟ್ಟಿಪಳ್ಳ ನಿವಾಸಿ ಫಯಾಝ್ ಈ ಅದೃಷ್ಟದಾತ. ಕಳೆದ ಆರು ತಿಂಗಳಿನಿಂದ ತನ್ನ ಸ್ನೇಹಿತನೋರ್ವನ ಮೂಲಕ ಅಬುದಾಬಿ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದ ಫಯಾಝ್ ಗೆ ಅದೃಷ್ಟ ಖುಲಾಯಿಸಿದ್ದು, ಸುಮಾರು 23 ಕೋಟಿಯನ್ನು ಗೆಲ್ಲುವ ಮೂಲಕ ದಿನ ಬೆಳಗಾಗುವುದರೊಳಗೆ ಕೋಟಿಯಾಧಿಪತಿಯಾಗಿದ್ದಾರೆ.

ದೇವಿಯ ಆರಾಧನೆಯೇ ಪಿಲಿವೇಷಕ್ಕೆ ಮುಖ್ಯ

ಪಿಲಿವೇಷ ಮೊದಲ ಕುಣಿತ ಆರಂಭವಾಗುವುದು ದೇವಸ್ಥಾನದಿಂದ. ವೇಷ ಹಾಕಿ ಮೊದಲು ದೇವರ ಮುಂದೆ ಕುಣಿದ ಬಳಿಕ ಪೇಟೆ ಬೀದಿಗಳಿಗೆ, ಮನೆಮನೆಗಳಿಗೆ ತೆರಳುತ್ತಾರೆ. ಹತ್ತು ದಿನಗಳ ಕುಣಿತದ ಕೊನೆಯಲ್ಲಿ ವೇಷ ಕಳಚುವ ಮುನ್ನ ಕೊನೆಯಕುಣಿತವೂ ದೇವರ ಮುಂದೆಯೇ ನಡೆಯುತ್ತದೆ.
ಕುಣಿತ ಮೆಚ್ಚಿ ಜನರು ಕೊಟ್ಟ ಹಣದಲ್ಲಿ ಸ್ವಲ್ಪ ಭಾಗವನ್ನು ದೇವರಿಗೆ ಕಾಣಿಕೆ ಹಾಕಿ ಉಳಿದದ್ದನ್ನು ತಮಗಾಗಿ ಬಳಸುತ್ತಾರೆ ಈ ವೇಷಧಾರಿಗಳು. ಹೀಗೆ ಪ್ರತಿ ಕುಣಿತದ ಹಿಂದೆ ದೈವೀ ಸಮರ್ಪಣೆಯ ನಂಬಿಕೆಯೂ ಇದೆ.

ಕಿಸ್ ದಿ ಬೊಂಡ ವಿದ್ಯಾರ್ಥಿಗಳ ಅಭಿಯಾನ

ಮಂಗಳೂರಿನಲ್ಲಿ ಹೊಸ ಅಭಿಯಾನವೊಂದು ಆರಂಭವಾಗಿದೆ. ‘ಕಿಸ್ ದಿ ಬೊಂಡ’ ಎನ್ನುವ ಮೂಲಕ ಬೊಂಡವನ್ನು ಪ್ಲಾಸ್ಟಿಕ್ ಸ್ಟ್ರಾ ಇಲ್ಲದೇ ಕುಡಿಯುವ ವಿನೂತನ ಕೆಲಸವಿದು. ಪ್ಲಾಸ್ಟಿಕ್ ಬಳಕೆಯನ್ನೇ ಪೂರ್ಣವಾಗಿ ಬಿಟ್ಟು ಬಿಡೋಣ ಎನ್ನುವ ಸಂದೇಶ ಸಾರುವ ಈ ಅಭಿಯಾನದ ಹಿಂದೆ ವಿದ್ಯಾರ್ಥಿಗಳ ತಂಡವೊಂದು ಕೆಲಸ ಮಾಡಿದೆ.
ಜ್ಯೂಸ್ ಅಂಗಡಿ ಸೇರಿದಂತೆ ಪ್ರತಿಯೊಂದು ಕಡೆಯಲ್ಲೂ ಜ್ಯೂಸ್ ಸೇರಿದಂತೆ ತಂಪು ಪಾನೀಯಗಳನ್ನು ಪ್ಲಾಸ್ಟಿಕ್ ಸ್ಟ್ರಾ ಬಿಟ್ಟು ಉಳಿದ ರೀತಿಯಲ್ಲಿ ಕುಡಿಯಲು ಮುಂದಾಗಿ ಎನ್ನುವುದೇ ಈ ಅಭಿಯಾನದ ಮೂಲ ಉದ್ದೇಶ. ವಿದ್ಯಾರ್ಥಿಗಳ ಈ ಚಾಲೆಂಜ್‌ಗೆ ನೀವು ಸಹಕರಿಸಿ.