Tagged: udupi

ಎಸ್ಸೆಸ್ಸೆಲ್ಸಿ ತುಳು ಭಾಷೆಯಲ್ಲಿ 100 ರಿಸಲ್ಟ್

ಎಸ್ಸೆಸ್ಸೆಲ್ಸಿ ಫಲಿತಾಂಶ ಈಗಾಗಲೇ ಹೊರಬಿದಿದ್ದು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ಐಚ್ಚಿಕ ವಿಷಯವಾಗಿ ಬೋಧಿಸಲಾಗುತ್ತಿದ್ದು ಈ ಬಾರಿ ಎಸ್.ಎಲ್.ಎಲ್.ಸಿ. ಪರೀಕ್ಷೆಯಲ್ಲಿ ಒಟ್ಟು 617 ವಿದ್ಯಾರ್ಥಿಗಳು ತುಳು ಭಾಷೆ ಪರೀಕ್ಷೆ ಬರೆದಿದ್ದಾರೆ.

ಅದರಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು ಶೇ. 100 ಫಲಿತಾಶ ದಾಖಲಾಗಿದೆ. ಅದರಲ್ಲಿಯೂ 63 ವಿದ್ಯಾರ್ಥಿಗಳು ನೂರಕ್ಕೆ100 ಅಂಕ ಪಡೆದಿದ್ದಾರೆ.ಉಭಯ ಜಿಲ್ಲೆಗಳ ಒಟ್ಟು 41 ಶಾಲೆಗಳಲ್ಲಿ ತುಳು ಪಠ್ಯ ಬೋಧನೆ ನಡೆಯುತ್ತಿದೆ. ತುಳುವಿನಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಿಲ್ಲೆಯ ಒಟ್ಟು ಫಲಿತಾಶದಲ್ಲಿ ಏರಿಕೆ ಕಂಡುಬಂದಿದೆ.

6 ಕಿಮೀ ನಡೆದು ಶಾಲೆಗೆ ಹೋಗಿ ಗೆದ್ದು ಬಂದಳು

22 ಕಿ. ಮೀ ದೂರ ಶಾಲೆ. ದಿನಾ ಆರು ಕಿ.ಮೀ ನಡಿಗೆ. ಆಗಾಗ ಕೈಕೊಡುವ ವಿದ್ಯುತ್. ಇಂತಹ ಪರಿಸ್ಥಿತಿಯಲ್ಲೂ ಛಲದಿಂದ ಓದಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿದ ಸುಬ್ರಹ್ಮಣ್ಯ ಸಮೀಪದ ಕೇನ್ಯದ ಕೃಪಾ ಕೆ. ಆರ್. ಅವರ ಸಾಧನೆ ಸಿಟಿಯಲ್ಲಿ ಓದುವ ಮಕ್ಕಳಿಗೆ ಮಾದರಿಯಾಗಿದ್ದಾರೆ. ಸಿಟಿಯಲ್ಲಿ ಶಾಲೆಗೆ ಬಸ್, ರಿಕ್ಷಾದಲ್ಲಿ ಕರೆದುಕೊಂಡು ಹೋದರೂ ಇಂತಹ ಮಾರ್ಕ್ಸ್ ಪಡೆದುಕೊಂಡಿಲ್ಲ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರಾವಳಿ ಯಾಕೆ ಇಳಿಯಿತು

2019ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಏಳನೇ ಹಾಗೂ ಉಡುಪಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಕಳೆದ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದ ಉಡುಪಿ ನಾಲ್ಕು ಸ್ಥಾನ ಕೆಳಗಿಳಿದಿದೆ. ದಕ್ಷಿಣ ಕನ್ನಡ 2018ರಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಈ ಬಾರಿ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಳ್ಳುವಂತಾಗಿದೆ.

ಪಿಯುಸಿ ಉತ್ತಮ ಫಲಿತಾಂಶವನ್ನೇ ಪಡೆದುಕೊಂಡಿರುವ ಉಡುಪಿ ಹಾಗೂ ದಕ್ಷಿಣ ಕನ್ನಡ ಪ್ರಥಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮಾತ್ರ ಅಗ್ರಸ್ಥಾನಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹಾಸನ ಪ್ರಥಮ ಹಾಗೂ ರಾಮನಗರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಮಂಗಳೂರು ಮಲ್ಲಿಗೆಗೆ ಮನಸೋಲದವರಿಲ್ಲ

ಮಲ್ಲಿಗೆ ತುಳುನಾಡಿನ ಮಣ್ಣಿಂದ ಮಿಂದೆದ್ದ ಸುಗಂಧವತಿ. ಇಲ್ಲಿ ಮಲ್ಲಿಗೆ ಇಲ್ಲದೆ ಯಾವುದೇ ಮಂಗಳ ಕಾರ್ಯ ನಡೆಯುವುದಿಲ್ಲ.
ಭೌಗೋಳಿಕ ಚಿಹ್ನೆಯ ಮಾನ್ಯತೆ ಪಡೆದ ಉಡುಪಿ ಮಲ್ಲಿಗೆ ವಹಿವಾಟಿನಲ್ಲಿ ಮುಂಚೂಣಿಯಲ್ಲಿದ್ದರೆ, ಸಾಂಪ್ರದಾಯಿಕ ಹಿನ್ನೆಲೆ ಹಾಗೂ ಘಮಘಮಿಸುವ ಪರಿಮಳದಿಂದ ಮಂಗಳೂರು ಮಲ್ಲಿಗೆ ಇಂದಿಗೂ ತನ್ನದೇ ಆದ ವಿಶೇಷತೆ ಉಳಿಸಿಕೊಂಡಿದೆ.
ಮಂಗಳೂರು ಮಲ್ಲಿಗೆ ಉಡುಪಿ ಮಲ್ಲಿಗೆಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಮೊಗ್ಗಿನ ತುದಿ ಮೊನಚಾಗಿರುತ್ತದೆ. ಉಡುಪಿ ಮಲ್ಲಿಗೆ ಮೊಗ್ಗು ತುದಿ ಸ್ವಲ್ಪ ಮೊಂಡು.
ಮಧುಮಗಳ ಸಿಂಗಾರಕ್ಕೆ ಎರಡು ಚೆಂಡಾದರೂ ಮಂಗಳೂರು ಮಲ್ಲಿಗೆ ಬೇಕು ಎನ್ನುವ ನಂಬಿಕೆಯನ್ನು ಈ ಭಾಗದ ಹೆಚ್ಚಿನ ಜನರು ಬೆಳೆಸಿಕೊಂಡಿದ್ದಾರೆ. ಹಿಂದುಗಳ ಎಲ್ಲ ಮಂಗಳ ಕಾರ್ಯಕ್ರಮಗಳಿಗೆ ಈ ಹೂವು ಬೇಕೇಬೇಕು.
ಬ್ರಾಹ್ಮಣರು, ಬಂಟರು, ಜಿಎಸ್ಬಿ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.ಉಡುಪಿ ಮಲ್ಲಿಗೆ, ಶಂಕರಪುರ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಮಂಗಳೂರು ಮಲ್ಲಿಗೆ ಹೀಗೆ ವಿವಿಧ ಹೆಸರುಗಳ ಮಲ್ಲಿಗೆ ಕರಾವಳಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ.