ಉಡುಪಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಗುರು ಪೂರ್ಣಿಮಾ ದ ಅಂಗವಾಗಿ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ಸಮಯದಲ್ಲಿ ಉಡುಪಿ ಕೃಷ್ಣ ನ ಪ್ರತಿಮೆ ಪ್ರಭಾವಳಿಯನ್ನು ನೀಡುವ ಮೂಲಕ ಉತ್ತಮ ಸರಕಾರಕ್ಕೆ ಶುಭ ಹಾರೈಸಿದರು.
Tagged: udupi
ಶ್ರೀಕೃಷ್ಣ ನಿಗೆ ಅರ್ಪಿಸಿದ ತುಳಸಿಯೇ ಮೆಡಿಸಿನ್
ಉಡುಪಿ ಶ್ರೀ ಕೃಷ್ಣ ನಿಗೆ ನಿತ್ಯವೂ ಅರ್ಪಿಸುವ ಲಕ್ಷ ಲಕ್ಷ ತುಳಸಿ ಈಗ ಆಯುರ್ವೇದ ಕಂಪನಿಯೊಂದು ಔಷಧವಾಗಿ ಬದಲಾಯಿಸುವ ಕೆಲಸ ಮಾಡುತ್ತಿದೆ. ವಿಶೇಷವಾಗಿ ತುಳಸಿಯ ಕಫ ಸಂಬಂಧಿಸಿದ ಔಷಧ,ನಶ್ಯ,ಸಿರಪ್ ಗಳನ್ನು ಮಾಡುತ್ತಿದೆ. ದಿನಕ್ಕೆ 10 ಕೆಜಿ ತುಳಸಿಯನ್ನು ನಾನಾ ವಿಧಾನವನ್ನು ಬಳಸಿಕೊಂಡು ಮಾಡುವ ಮೂಲಕ ದೇವರಿಗೆ ಬಳಸಿದ ತುಳಸಿಯನ್ನು ಔಷಧೀಯವಾಗಿ ಯೂ ಬಳಸಿಕೊಳ್ಳುವ ಕೆಲಸ ಬಹಳ ಒಳ್ಳೆಯದು.
ಮೀನುಗಾರರಿಗೆ ಇನ್ನು ಎರಡು ತಿಂಗಳು ರಜೆ
ಮತ್ತೇ ಮೀನುಗಾರರಿಗೆ ಎರಡು ತಿಂಗಳ ರಜೆ ಘೋಷಣೆಯಾಗಿದೆ. ಜೂನ್1 ರಿಂದ ಜುಲೈ ಕೊನೆಯ ವರೆಗೆ ಯಾಂತ್ರಿಕೃತ ಬೋಟ್ ಗಳು ಮೀನು ಹಿಡಿಯುವ ಆಗಿಲ್ಲ. ಈ ಸಮಯದಲ್ಲಿ ನಾಡದೋಣಿಗಳಿಗೆ ಮಾತ್ರ ಅವಕಾಶವಿದೆ.
ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಪರ್ಸಿನ್ ಬೋಟುಗಳು ಐದು ತಿಂಗಳ ಮೊದಲೇ ಮೀನುಗಾರಿಕೆ ಹೋಗಿಲ್ಲ. ಒಟ್ಟಾರೆ ಈ ಬಾರಿಯಂತೂ ಮೀನುಗಾರರಿಗೆ ನಷ್ಟದ ವರ್ಷ ಎಂದೇ ಪರಿಗಣಿಸಬಹುದು.
ಕರಾವಳಿಯ 65 ಸರಕಾರಿ ಶಾಲೆಯಲ್ಲಿ ಇನ್ನು ಫುಲ್ ಇಂಗ್ಲಿಷ್
ಒಂದಲ್ಲ ಎರಡಲ್ಲ ದ.ಕ ಹಾಗೂ ಉಡುಪಿಯ 65 ಶಾಲೆಗಳಲ್ಲಿ ಇನ್ನು ಫುಲ್ ಇಂಗ್ಲೀಷ್ ಕಾಣಿಸಿಕೊಳ್ಳಲಿದೆ. ಮುಖ್ಯವಾಗಿ ದ.ಕದ 43 ಹಾಗೂ ಉಡುಪಿ ಯ 22 ಶಾಲೆಗಳು ಈ ಸರ್ತಿ ಎಲ್ ಕೆಜಿಯಿಂದ ಹತ್ತನೇಯ ತರಗತಿಯ ವರೆಗೆ ಇಂಗ್ಲೀಷ್ ಮಾಧ್ಯಮ ವಾಗಿ ಬದಲಾಗಲಿದೆ. ಈಗಾಗಲೇ 63 ದ.ಕದ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.
ಮೀನುಗಾರನ ಬಲೆಗೆ ಬಿದ್ದ ಬಿಗ್ ತೊರಕೆ ಮೀನು!
ಒಂದಲ್ಲ ಎರಡಲ್ಲ ಭರ್ತಿ 1200 ಕೆಜಿ ತೂಕದ ತೊರಕೆ ಮೀನು ಮಲ್ಪೆ ಮೀನುಗಾರ ಮಿಥುನ್ ಕುಂದರ್ ಅವರ ಬಲೆಗೆ ಶನಿವಾರ ಬಿದ್ದಿದೆ.
ಮಿಥುನ್ ಕುಂದರ್ ಅವರ ಮಾಲೀಕತ್ವದ ವಿಘ್ನರಾಜ್ -2 ಆಳಸಮುದ್ರಗಾರಿಕೆಯ ಬೋಟಿನ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾಗ ಅವರಿಗೆ ಸಿಕ್ಕಿದೆ. ವಿಶೇಷವಾಗಿ ಇದನ್ನು ಮಂಗಳೂರಿನ ಒಣ ಮೀನು ವ್ಯಾಪಾರಿಯೊಬ್ಬರು ಕೆಜಿಗೆ 50 ರೂನಂತೆ ಕೊಟ್ಟು ಖರೀದಿ ಮಾಡಿದ್ದಾರೆ.