ಕುಡ್ಲ ಅದರಲ್ಲೂ ಕರಾವಳಿಯಲ್ಲಿ ಮಳೆರಾಯನ ಎಂಟ್ರಿಯಾಗುತ್ತಿದ್ದಂತೆ ಕೆಸುವಿನ ಎಲೆಯ ಪತ್ರೊಡೆ ನೆನಪಿಗೆ ಬರುತ್ತದೆ. ಕರಾವಳಿ ಎಲ್ಲರಿಗೂ ಇದನ್ನು ಮಾಡುವ ಹಾಗೂ ತಿನ್ನುವ ವಿಚಾರ ಗೊತ್ತಿದೆ. ಕರಾವಳಿಯ ಒಂದೊಂದು ಊರಿನವರು ಒಂದೊಂದು ರೀತಿಯಲ್ಲಿ ಪತ್ರೊಡೆ ಮಾಡುತ್ತಾರೆ ಎಲ್ಲಕ್ಕೂ ಒಂದೇ ರೀತಿಯ ಟೇಸ್ಟ್ ಮಾರಾಯ್ರೆ. ಮಳೆಗಾಲದ ಎಂಟ್ರಿ ಅಗುತ್ತಾ ಕೆಸುವಿನ ಎಲೆಗಳು ಸಮೃದ್ಧ ವಾಗಿ ಬೆಳೆಯುತ್ತದೆ. ಇದು ಬರೀ ಕರಾವಳಿಯಲ್ಲಿ ಮಾತ್ರವಲ್ಲ ರಾಜ್ಯದ ಮಲೆನಾಡಿನಲ್ಲೂ ಇದನ್ನು ಮಾಡುತ್ತಾರೆ. ಮಂಗಳೂರಿನ ಕೆಲವು ಖ್ಯಾತ ಹೋಟೆಲ್ ಗಳು ಇದನ್ನು ವರ್ಷವಿಡೀ ಮಾಡುವ ಮೂಲಕ ಗ್ರಾಹಕರಿಗೆ ವರ್ಷಪೂರ್ತಿ ಪತ್ರೊಡೆ ತಿನ್ನಿಸುವ ಕೆಲಸ ಮಾಡುತ್ತಿದೆ ಆದರೆ ಮಳೆ ಬಂದಾಗ ಮನೆಯ ಅಡುಗೆ ಕೋಣೆಯಲ್ಲಿ ಸಿದ್ದವಾಗುವ ಪತ್ರೊಡೆ ಮುಂದೆ ಯಾವುದು ಲೆಕ್ಕಕ್ಕೆ ಇಲ್ಲ ಬಿಡಿ.