Tagged: Mangalorean

ನವದೇವತೆ- 4 ಕೂಷ್ಮಾಂಡಾ

ಒಂದು ಸಮಯದಲ್ಲಿ ದುರ್ಗಾಮಾತೆ ಸೂರ್ಯನ ಒಳಗೆ ವಾಸಿಸಲು ಆರಂಭಿಸುತ್ತಾಳೆ. ಆಗ ಸೂರ್ಯನಿಂದ ವಿಶ್ವಕ್ಕೆ ಶಕ್ತಿ ಬಿಡುಗಡೆಯಾಗುತ್ತದೆ. ಸೊರ್ಯನೊಳಗೆ ನೆಲೆಸುವಷ್ಟು ಪ್ರಖರವಾದ ದೇವತೆಯಾಕೆ. ಎಂಟು ಕೈಗಳಿರುವ, ಸಿಂಹದ ಮೇಲೆ ಸಂಚರಿಸುವ ಈಕೆ ತನ್ನ ಭಕ್ತರಿಗೆ ಸಿದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆಂಬ ನಂಬಿಕೆಯಿದೆ. ಕೂಷ್ಮಾಂಡಾ ದೇವಿಯ ಪ್ರಸಿದ್ಧ ದೇವಸ್ಥಾನ ಉತ್ತರ ಪ್ರದೇಶದ ಕಾನ್ಪುರ ನಗರದ ಜಿಲ್ಲೆಯ ಘಟಾಂಪುರದಲ್ಲಿದೆ.

ಮೊಂತಿ ಹಬ್ಬಕ್ಕೆ ಮಕ್ಕಳ ಪುಷ್ಪ ನಮನ

ಕರಾವಳಿಯ ಕ್ರೈಸ್ತ ಹಬ್ಬಗಳಲ್ಲಿ ವಿಶೇಷವಾಗಿ ಮೊಂತಿ ಹಬ್ಬ(ತೆನೆ ಹಬ್ಬ)ಕ್ಕೆ ವಿಶೇಷವಾದ ಮನ್ನಣೆಯಿದೆ. ಈ ಬಾರಿ ಆಗಸ್ಟ್ 30 ರಿಂದ ಸೆಪ್ಟೆಂಬರ್7ರ ವರೆಗೆ ನೊವೆನಾ ಜತೆಯಲ್ಲಿ ಕನ್ಯಾ ಮರಿಯಮ್ಮರಿಗೆ ಪುಷ್ಪ ನಮನವಂತೂ ವಿಶೇಷವಾಗಿರುತ್ತದೆ.
ಕುರಲ್ ಹಬ್ಬ, ತೆನೆ ಹಬ್ಬ, ಮೊಂತಿ ಹಬ್ಬ ಎನ್ನುವ ನಾನಾ ಹೆಸರಿನಲ್ಲಿ ಗುರುತಿಸುವ ಹಬ್ಬದ ವಿಶೇಷತೆ ಎಂದರೆ ಪೂರ್ಣ ಸಸ್ಯಹಾರ ಈ ಹಬ್ಬದ ವಿಶೇಷತೆ. ಕರಾವಳಿಯ ಕ್ರೈಸ್ತರು ಈ ಹಬ್ಬವನ್ನು ತುಳುವರ ಹಬ್ಬ( ಚೌತಿ)ಯಿಂದ ಪ್ರೇರಣೆ ಪಡೆದುಕೊಂಡು ಮಾಡುತ್ತಿದ್ದಾರೆ ಎನ್ನುವುದು ಈ ಹಬ್ಬದ ಇತಿಹಾಸ.

ಕುಡ್ಲದ ಕಾರ್ನಾಡ್ ಸದಾಶಿವ ರಾವ್ ರಸ್ತೆ ಕತೆ…

ಕಾರ್ನಾಡ್ ಸದಾಶಿವ ರಾವ್ ದಕ್ಷಿಣ ಭಾರತದ ಗಾಂಧಿ ಎಂದು ಪ್ರಸಿದ್ಧಿ ಪಡೆದವರಿವರು. ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಚಾಲನೆ ಕೊಟ್ಟ ದೇಶಪ್ರೇಮಿ. ಮಂಗಳೂರಿನ ಕಾರ್ನಾಡ್ ಎಂಬಲ್ಲಿ 1881ರಲ್ಲಿ ಜನಿಸಿದ ಸದಾಶಿವರಾವ್ ಕಾರ್ನಾಡ್ ಎಂದೇ ಚಿರಪರಿಚಿತರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಕಾರ್ನಾಡರು ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಕಾಲ ಕಳೆಯಬಹುದಾಗಿತ್ತು.
ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದ ಕರೆಗೆ ಓಗೊಟ್ಟು ಚಳವಳಿಗೆ ಧುಮುಕಿದ ಅವರು, ತಮ್ಮ ಜೀವನದ ಕೊನೆಯವರೆಗೂ ಹೋರಾಟಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟಂತಹ ಮಹಾನುಭಾವ. ಕಾರ್ನಾಡರು ಕೇವಲ ಸ್ವಾತಂತ್ರ್ಯ ಹೋರಾಟಕಷ್ಟೇ ತಮ್ಮ ಬದುಕನ್ನು ಮೀಸಲಾಗಿಟ್ಟಿರಲಿಲ್ಲ. ಹಿಂದುಳಿದ ಜಾತಿಗಳ ಬಗ್ಗೆ, ಮೂಢನಂಬಿಕೆ ವಿರುದ್ಧ, ಸಾಮಾಜಿಕ ಕ್ಷೇತ್ರದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ಸತತವಾಗಿ ಹೋರಾಟ ನಡೆಸಿದ್ದರು. ಪತ್ನಿ ಶಾಂತಾಭಾಯಿ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದರು. ಆಕೆ ಕೂಡ ಮಹಿಳಾ ಸಭಾವನ್ನು ಹುಟ್ಟು ಹಾಕಿ ಬಾಲ ವಿಧವೆಯರಿಗೆ ನೆರವು ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪಣತೊಟ್ಟಿದ್ದರು.
1936 ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬಯಿಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9 ರಂದು ಸಾವನ್ನಪ್ಪಿದ್ದರು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟ ಕಾರ್ನಾಡರು, ತನ್ನೆಲ್ಲಾ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಾಗಿತ್ತು.
ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ದಿ.ಡಾ.ಶಿವರಾಮ ಕಾರಂತರು ಕಾರ್ನಾಡರನ್ನು ಧರ್ಮರಾಜ ಅಂತ ಕರೆದಿದ್ದರು. ಅಂದಹಾಗೆ ಅವರ ನೆನಪಿಗಾಗಿ ಕುಡ್ಲದ ಕೆ.ಎಸ್.ರಾವ್ ರಸ್ತೆ ಅವರ ನೆನಪಿಗಾಗಿ ನಾಮಕರಣ ಮಾಡಲಾಗಿದೆ. ಈ ರಸ್ತೆಯಲ್ಲಿ ಬಹಳಷ್ಟು ವ್ಯಾಪಾರ ಕೇಂದ್ರಗಳು, ಬ್ಯಾಂಕ್‌ಗಳು ಕಾರ‍್ಯಾಚರಿಸುತ್ತಿದೆ.
pics: Nandan Bhat

ಮಂಗಳೂರಿನ ಚರ್ಚ್ ಗಳಲ್ಲೂ ಅನ್ನದಾನ !

ಮಂಗಳೂರಿಗೆ ಬಂದು ಊಟಕ್ಕೆ ಹಣ ಇಲ್ಲಹೊಟ್ಟೆಯಲ್ಲಿ ಕೂರಬೇಕಿಲ್ಲ. ಮಂಗಳೂರಿನ ಕದ್ರಿ, ಕುದ್ರೋಳಿ, ಕಟೀಲು, ಸುಂಕದಕಟ್ಟೆ ದೇವಳದಲ್ಲಿ ಭಕ್ತಾದಿಗಳಿಗೆ ಮಧ್ಯಾಹ್ನ ಉಚಿತ ಊಟ(ದೇವರ ಪ್ರಸಾದ)ದ ವ್ಯವಸ್ಥೆ ಇರುತ್ತದೆ. ಅದರಲ್ಲೂ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲೂ ಇಂತಹ ಅನ್ನದಾನದ ಕಲ್ಪನೆಯನ್ನು ಆಳವಡಿಸಿಕೊಂಡಿದ್ದಾರೆ.

ದಿನನಿತ್ಯದ ಊಟದ ವ್ಯವಸ್ಥೆ ಇಲ್ಲದೇ ಇದ್ದರೂ ಕೂಡ ಕೆಲವೊಂದು ವಿಶೇಷ ದಿನಗಳಲ್ಲಿ ಅನ್ನದಾನದ ವ್ಯವಸ್ಥೆಯಿದೆ. ಮಂಗಳೂರಿನ ಕೆಲವೊಂದು ಕ್ರೈಸ್ತ ಧರ್ಮದ ಪುಣ್ಯಕ್ಷೇತ್ರಗಳಾದ ಮುಡಿಪು ಸಂತ ಜೋಸೆಫ್( ಶುಕ್ರವಾರ), ಪಕ್ಷಿಕೆರೆ ಸಂತ ಜೂದ್(ಮಂಗಳವಾರ) ಬೋಂದೆಲ್ ಸಂತ ಲಾರೆನ್ಸ್ (ಮಂಗಳವಾರ), ಅಲಂಗಾರು ಬಾಲಯೇಸು ಮಂದಿರ( ಶುಕ್ರವಾರ), ಬಿಕರ್ನಕಟ್ಟೆ ಬಾಲಯೇಸು ಮಂದಿರ (ಗುರುವಾರ) ದೇವರ ಪ್ರಸಾದ(ಅನ್ನದಾನ)ದ ವ್ಯವಸ್ಥೆ ಇರುತ್ತದೆ.

ತುಳುವಿನ ಪ್ರಾಪರ್ಟಿ ಅರಶಿನ ಎಲೆಯ ಪತ್ತೋಳಿ

ಅರಶಿನ ಎಲೆಯ ಪತ್ತೋಳಿ ಇದು ತುಳುನಾಡಿನ ಕೊಂಕಣಿ ಸಮುದಾಯದವರು ಅರಶಿನ ಎಲೆಯಲ್ಲಿ ಮಾಡುವ ಸ್ವೀಟ್ ಡಿಶ್. ನಾಗರ ಪಂಚಮಿ ಹತ್ತಿರ ಬರುತ್ತಿದ್ದಂತೆ ಅರಶಿನ ಎಲೆಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿ ಬಿಡುತ್ತದೆ.

ವಿಶೇಷವಾಗಿ ಮಾರುಕಟ್ಟೆಯಲ್ಲಿ ನಾಗರ ಪಂಚಮಿ ಹಾಗೂ ಅದರ ಹಿಂದಿನ ಒಂದು ದಿನ ಅರಶಿನ ಎಲೆಗಳಿಗೆ ಭರ್ಜರಿ ಬೇಡಿಕೆಯಿದೆ. ಅಂದಹಾಗೆ ಅರಶಿನ ಎಲೆಯಿಂದ ಸಾಕಷ್ಟು ಔಷಧೀಯ ಗುಣವನ್ನು ಹೊಂದಿದೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಅರಸಿನ ಎಲೆಯಿಂದ ಮಾಡಿದ ಸ್ವೀಟ್ ಡಿಶ್ ಜೀರ್ಣ ಕ್ರಿಯೆಗೆ ಸಹಕಾರಿ, ಹೊಟ್ಟೆ ಉಬ್ಬರ ಸೇರಿದಂತೆ ನಾನಾ ರೋಗಗಳಿಗೆ ಮದ್ದಾಗಿದೆ.