ಭಾರತೀಯನ ಕ್ರಿಕೆಟ್ ತಂಡದ ಸದಸ್ಯ ಕೆ.ಎಲ್.ರಾಹುಲ್ ಕುಡ್ಲ ಸಿಟಿಯೊಳಗಿರುವ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ 150ರ ಸಂಭ್ರಮದಲ್ಲಿ ಭಾಗವಹಿಸಿ ಎನ್ನುವ ಪುಟ್ಟದಾದ ವಿಡಿಯೋವೊಂದು ಸಾಮಾಜಿಕ ಅಂಗಳದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಅಪ್ಪಟ ತುಳು ಹಾಗೂ ಕನ್ನಡ ಭಾಷೆಯ ಜತೆಗೆ ಇಂಗ್ಲೀಷ್‍ನ ಮಾತುಗಾರಿಕೆ ಸಾಮಾಜಿಕ ಜಾಲತಾಣದಲ್ಲಿರುವ ಮಂದಿಯಿಂದ ಲಕ್ಷಗಟ್ಟಲೆ ಲೈಕ್ಸ್ ಗಿಟ್ಟಿಸಿಕೊಂಡಿದೆ. ಹೌದು. ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಎಂದೇ ಕರೆಸಿಕೊಳ್ಳುವ ಕೆ.ಎಲ್.ರಾಹುಲ್ ಮೂಲತಃ ಮಂಗಳೂರಿನವರು ಅವರ ಬಾಲ್ಯ ಎಲ್ಲವೂ ಎನ್‍ಐಟಿಕೆಯ ಅಸುಪಾಸಿನಲ್ಲಿಯೇ ನಡೆದಿದೆ. ಎನ್‍ಐಟಿಕೆ ಶಾಲೆಯಲ್ಲಿ ಹತ್ತರ ವರೆಗೆ ಅಧ್ಯಯನ ಮಾಡಿದ ಬಳಿಕ ಮಂಗಳೂರಿನ ಸಂತ ಅಲೋಶಿಯಸ್‍ನಲ್ಲಿ ಪಿಯು ಮುಗಿಸಿಕೊಂಡು ನಂತರ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿದವರು. ವಿಶೇಷವಾಗಿ ಕುಡ್ಲದ ಕುರಿತು ರಾಹುಲ್ ಅಪಾರವಾದ ಪ್ರೀತಿ ಇರುವುದರಿಂದ ಕರಾವಳಿಯ ತುಳುವರು ಸಿಕ್ಕಾಗ ತುಳುವಿನಲ್ಲಿಯೇ ಮಾತಿಗಿಳಿಯುವ ಸ್ನೇಹ ಜೀವಿ. ಕನ್ನಡ ಭಾಷೆಯಲ್ಲೂ ಒಳ್ಳೆಯ ಮಾತುಗಾರಎನ್ನುತ್ತಾರೆ ಅವರ ತಾಯಿ ಪೆÇ್ರ. ರಾಜೇಶ್ವರಿ ಅವರು. ಅಮ್ಮನ ಪ್ರೀತಿಗೆ ಮಾಡಿದ ವಿಡಿಯೋ: ಮಂಗಳೂರು ವಿವಿಯ ಇತಿಹಾಸ ವಿಭಾಗದಲ್ಲಿ ಕಳೆದ 26 ವರ್ಷಗಳಿಂದ ಇತಿಹಾಸವನ್ನು ಬೋಧಿಸುತ್ತಿರುವ ಪೆÇ್ರ.ರಾಜೇಶ್ವರಿ ಅವರು ಕೆ.ಎಲ್.ರಾಹುಲ್ ಅವರ ತಾಯಿ. ಈ ಬಾರಿ ಮಂಗಳೂರು ವಿವಿ ಕಾಲೇಜು 150ರ ಸಂಭ್ರಮದಲ್ಲಿದೆ. ಫೆ.6ರಂದು ಇದರ ಕಾರ್ಯಕ್ರಮ ಕೂಡ ನಡೆಯಲಿದೆ. ಈ ವಿಚಾರದಲ್ಲಿ ಏನಾದರೂ ರಾಹುಲ್ ಅವರಿಂದ ವಿಡಿಯೋ ಮಾಡಿಸಿಬಿಡಿ ಎಂದು ಕಾಲೇಜಿನವರು ಕೇಳಿಕೊಂಡಿದ್ದರು. ಈ ಕುರಿತು ಪೆÇ್ರ. ರಾಜೇಶ್ವರಿ ಅವರು ಹೀಗೆ ಹೇಳುತ್ತಾರೆ ರಾಹುಲ್ ಸಿಕ್ಕಾಪಟ್ಟೆ ಬ್ಯುಸಿ ಇರುತ್ತಾನೆ. ತರಬೇತಿ, ಟೂರ್ನಿ ಎಂದು ಓಡಾಟ ಮಾಡುತ್ತಾ ಇರುತ್ತಾನೆ. ನನ್ನ ಕಾಲೇಜಿನ ಕಾರ್ಯಕ್ರಮವಿದೆ ಒಂದು ಪುಟ್ಟ ವಿಡಿಯೋ ಮಾಡಿ ಕೊಡು ಎಂದು ಕೇಳಿದ್ದೆ. ಅದಕ್ಕೂ ಮೊದಲು ಸಾಕಷ್ಟು ಬಾರಿ ಕಾಲೇಜಿಗೂ ಕರೆಯಲು ಪ್ರಯತ್ನ ಪಟ್ಟಿದ್ದೆ ಅದು ಸಾಧ್ಯವಾಗಲಿಲ್ಲ. ಈಗ ಪುಟ್ಟ ವಿಡಿಯೋವೊಂದನ್ನು ಮಾಡಿ ಕಳುಹಿಸಿಕೊಟ್ಟಿದ್ದಾನೆ ಎನ್ನುವುದು ಅವರ ಮಾತು. ಮಂಗಳೂರು ವಿವಿಗೆ 1993ರ ಪ್ರೊ.ರಾಜೇಶ್ವರಿ ಅವರು ಮಂಗಳೂರು ವಿವಿಯ ಇತಿಹಾಸ ವಿಭಾಗಕ್ಕೆ ಸೇರಿದ್ದರು. ರಾಹುಲ್ ಅವರ ತಂದೆ ಎನ್‍ಐಟಿಕೆ ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಾ. ಕೆ.ಎನ್.ಲೊಕೇಶ್ ಕೆಲಸ ಮಾಡುತ್ತಿದ್ದಾರೆ. ರಾಹುಲ್ ತನ್ನ ಬಾಲ್ಯದ ಬಹಳಷ್ಟು ಸಮಯವನ್ನು ಮಂಗಳೂರಿನಲ್ಲಿ ಕಳೆದಿದ್ದಾನೆ. ಎನ್‍ಐಟಿಕೆ ಹಾಗೂ ನೆಹರೂ ಮೈದಾನದಲ್ಲಿಯೇ ರಾಹುಲ್ ಅವರ ಕ್ರಿಕೆಟ್ ಆಟಗಾರನಾಗಿ ಹೊರಹೊಮ್ಮಿದ ಎನ್ನುವುದು ಅವರ ಇತಿಹಾಸದ ಪುಟಗಳು ಹೇಳುವ ಮಾತು. ರಾಹುಲ್‍ಗೆ ತುಳು ಇಷ್ಟ: ರಾಹುಲ್ ಮಂಗಳೂರಿನಲ್ಲಿದ್ದಾಗ ಹೆಚ್ಚು ಗೆಳೆಯರು ತುಳುವಿನವರು ಆಗಿದ್ದರು. ಅವರಿಂದಲೇ ರಾಹುಲ್ ತುಳುವಿನಲ್ಲಿ ಒಳ್ಳೆಯ ರೀತಿಯಲ್ಲಿ ಮಾತನಾಡುತ್ತಾನೆ. ಯಾವುದೇ ಸಮಯದಲ್ಲಿ ತುಳುವರು ಸಿಕ್ಕರೆ ತುಳುವಿನಲ್ಲಿ ಅವರ ಜತೆಗೆ ಮಾತಿಗೆ ಇಳಿಯುತ್ತಾನೆ. ಕನ್ನಡ ಕೂಡ ಒಳ್ಳೆಯದಾಗಿ ಮಾತನಾಡುತ್ತಾನೆ. ಮಂಗಳೂರಿಗೆ 6 ತಿಂಗಳ ಹಿಂದೆ ಒಂದು ಸಲ ಎನ್‍ಐಟಿಕೆ ಕ್ವಾಟ್ರಸ್ ಗೆ ಬಂದಿದ್ದ. ನಾವೆಲ್ಲರೂ ಈಗ ಬೆಂಗಳೂರಿಗೆ ಶಿಫ್ಟ್ ಆಗಿದ್ದೇವೆ. ಅವನು ಸಮಯ ಸಿಕ್ಕಾಗ ಬೆಳಗ್ಗೆ ವಿಮಾನದಲ್ಲಿ ಬಂದು ಸಂಜೆ ಮತ್ತೆ ಹೊರಡುತ್ತಾನೆ ಎನ್ನುತ್ತಾರೆ ತಾಯಿ ರಾಜೇಶ್ವರಿ. ಮಂಗಳೂರು ವಿವಿ ಕಾಲೇಜಿನ ಪ್ರಿನ್ಸಿಪಾಲ್ ಪೆÇ್ರ.ಉದಯ ಕುಮಾರ್ ಇರ್ವತ್ತೂರು ಹೇಳುವಂತೆ ರಾಜ್ಯದಲ್ಲಿಯೇ ಮಂಗಳೂರು ವಿವಿ ಕಾಲೇಜು ಎರಡನೆ ಅತೀ ಪುರಾತನ ಕಾಲೇಜು. ಮೊದಲ ಸ್ಥಾನದಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿದೆ. 150ರ ಸಂಭ್ರಮದ ಕ್ಷಣದಲ್ಲಿ ರಾಹುಲ್ ಅವರಿಂದ ಒಂದು ಆಮಂತ್ರಣ ವಿಡಿಯೋ ಮಾಡಿಸುವ ಯೋಚನೆ ಬಂತು. ಅವರ ತಾಯಿಯಲ್ಲಿ ಹೇಳಿಸಿದೇವು ವಿಡಿಯೋ ಮಾಡಿಕೊಟ್ಟಿದ್ದಾರೆ ನೋಡುವಾಗ ಖುಷಿಯಾಗುತ್ತಿದೆ ಎನ್ನುತ್ತಾರೆ ಅವರು.
Tagged: Mangalorean
ಕುಡ್ಲದಲ್ಲಿ ಪೊಲಿಯೋ ಹನಿ ಹಾಕಲು ಜರ್ಮನಿಯ ಅತಿಥಿಗಳು
ಎಲ್ಲಿಯ ಜರ್ಮನಿ ಎಲ್ಲಿಯ ಕುಡ್ಲ ಎಲ್ಲಿಂದ ಎಲ್ಲಿಗೆ ಸಂಬಂಧ ಮಾರಾಯ್ರೆ. ದೇಶದ ನಾನಾ ಕಡೆ ಜ.19ರಂದು ಐದು ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಹನಿ ನೀಡುವ ಕಾರ್ಯಕ್ರಮ ನಡೆಯಿತು.
ಆದರೆ ಮಂಗಳೂರಿನ ಬಹುತೇಕ ಕಡೆಯಲ್ಲಿ ಜರ್ಮನಿ ಹಾಗೂ ಆಸ್ಟ್ರಿಯಾ ದವರು ಮಕ್ಕಳಿಗೆ ಹನಿ ನೀಡುವ ಜತೆಗೆ ಪೊಲಿಯೋ ಕುರಿತು ಹೆತ್ತವರಿಗೆ ಜಾಗೃತಿ ಮಾಡಲಾಗುತ್ತಿತ್ತು. 11 ಮಂದಿ ವಿದೇಶಿಯರ ತಂಡ ಪಲ್ಸ್ ಪೋಲಿಯೊ ಹಾಕುವ ಕೆಲಸವನ್ನು ಮಾಡಿದ್ದಾರೆ. ವಿಶೇಷವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆ ಪೋಲಿಯೊ ಗಾಗಿ ನಿಧಿ ಯೊಂದನ್ನು ಮಾಡಲಾಗಿದ್ದು ಅದರ ಮೂಲಕ ವಿದೇಶಿಯರು ಕುಡ್ಲಕ್ಕೆ ಬಂದು ಪಲ್ಸ್ ಪೋಲಿಯೊ ನೀಡುವ ಕೆಲಸ ಮಾಡಿದ್ದಾರೆ.
ಕುಡ್ಲ ಸಿಟಿ ವಿಶ್ವದಲ್ಲೇ ಸೇಫ್ ಸಿಟಿ ಮಾರಾಯ್ರೆ
ಹೊಸ ವರ್ಷದಲ್ಲಿ ವಿಶ್ವ ಪರ್ಯಟನೆ ಮಾಡುವ ಆಕಾಂಕ್ಷಿಗಳಿಗೆ, ವಿದೇಶಿ ಹೂಡಿಕೆದಾರರಿಗೆ ಸಿಹಿ ಸುದ್ದಿ ಬಂದಿದೆ. ವಿಶ್ವದ 100 ಅತೀ ಸುರಕ್ಷಿತ ನಗರಗಳ ಸಾಲಿನಲ್ಲಿ ಕಡಲನಗರಿ ಮಂಗಳೂರಿಗೆ 43ನೇ ಸ್ಥಾನ ದೊರೆತಿದೆ.
ನ್ಯೂಯಾರ್ಕ್‌ನ ಸಿಇಒ ವಲ್ಡ್ ಮ್ಯಾಗಸೀನ್ 2019ರ ಸಾಲಿನ ಅಂತ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ನಗರಗಳ ಪೈಕಿ ಮಂಗಳೂರು ನಂ. 1 ಅತೀ ಸುರಕ್ಷಿತ ನಗರ ಸ್ಥಾನ ಪಡೆದಿದೆ. ಉಳಿದಂತೆ ಟಾಪ್ 100ನಲ್ಲಿ ಗುಜರಾತ್‌ನ ವಡೋದರಾ, ಕೇರಳದ ತಿರುವನಂತಪುರ ಹಾಗೂ ಕೊಚ್ಚಿ, ಗುಜರಾತ್‌ನ ಅಹಮ್ಮದಾಬಾದ್ ಹಾಗೂ ಮಹಾರಾಷ್ಟ್ರದ ನವ ಮುಂಬೈ ಸ್ಥಾನ ಪಡೆದಿದೆ. ಸಿಇಒ ವಲ್ಡ್ ಮ್ಯಾಗಸೀನ್ ನಡೆಸಿದ ಸರ್ವೆಯಲ್ಲಿ ಕಳೆದ ಮೂರು ವರ್ಷಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುದಾಬಿ ಮೊದಲ ಸ್ಥಾನ ಅಲಂಕರಿಸಿದೆ. ಕತಾರ್‌ನ ದೋಹಾ ಎರಡನೇ ಹಾಗೂ ಕೆನಡಾದ ಕ್ಯೂಬೆಕ್ ಸಿಟಿ ಮೂರನೇ ಸ್ಥಾನ ಪಡೆದಿದೆ.
ಉಳಿದಂತೆ ತೈವಾನ್‌ನ ತೈಪೆ, ಜರ್ಮನಿಯ ಮುನೀಚ್, ಯುಎಇಯ ದುಬೈ, ಸ್ವಿಜರ್‌ಲ್ಯಾಂಡ್‌ನ ಝೂರಿಚ್ ಹಾಗೂ ಬೆರ್ನ್, ಟರ್ಕಿಯ ಎಸ್ಕಿಸಿಹಿರ್ ಹಾಗೂ ಹಾಂಕಾಂಗ್ ಟಾನ್ 10 ಪಟ್ಟಿಯಲ್ಲಿದೆ. ಪ್ರಥಮ ಮೂರು ಸ್ಥಾನಗಳನ್ನು ಪಡೆದಿರುವ ಯುಎಇಯ ಅಬುದಾಬಿ ಶೇ.89.03, ಕತಾರ್‌ನ ದೋಹಾ ಶೇ.88.43 ಹಾಗೂ ಕೆನಡಾದ ಕ್ಯುಬೆಕ್ ಸಿಟಿ ಶೇ.85.19 ಅಂಕ ಪಡೆದರೆ ಕರ್ನಾಟಕದ ಮಂಗಳೂರು ಶೇ.74.39 ಅಂಕ ಪಡೆದು 43ನೇ ಸ್ಥಾನದಲ್ಲಿದೆ.ಅಪರಾಧ ಸೂಚ್ಯಂಕದ ಆಧಾರದಲ್ಲಿ ನಗರಗಳಿಗೆ ರೇಟಿಂಗ್ ನೀಡಲಾಗಿದೆ.
ಪ್ರಪಂಚ ಸುತ್ತುವ ಪ್ರವಾಸಿಗರು ತಮ್ಮ ಯಾತ್ರೆಯ ಮುನ್ನ ಸುರಕ್ಷತೆಯ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ತಾವು ಹೋಗುತ್ತಿರುವ ನಗರ ಪ್ರವಾಸಕ್ಕೆ ಸುರಕ್ಷಿತವೇ ಎಂಬುವುದನ್ನು ಖಾತರಿಪಡಿಸಿದ ಬಳಿಕವಷ್ಟೇ ಪ್ರಯಾಣ ಆರಂಭಿಸುತ್ತಾರೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ಸಿಇಒ ವಲ್ಡ್ ಮ್ಯಾಗಸೀನ್ ಸಮೀಕ್ಷೆಗೆ ಮಹತ್ವ ಬಂದಿದೆ. ಪ್ರಪಂಚದ ಸುರಕ್ಷಿತ ನಗರಗಳ ಸಾಲಿನಲ್ಲಿ ಮಂಗಳೂರು ಸೇರಿರುವುದು ಪ್ರವಾಸೋದ್ಯಮ ಹಾಗೂ ವಿದೇಶಿ ಹೂಡಿಕೆಗೆ ಇನ್ನಷ್ಟು ಬಲ ನೀಡಲಿದೆ.
2018ರಲ್ಲಿ ಅಮೆರಿಕದ ಚಿಕಾಗೋ ಮೂಲದ ’ದಿ ಡೈಲಿ ಮೀಲ್’ ವೆಬ್‌ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಮಂಗಳೂರು ವಿಶ್ವದ ಅತ್ಯಂತ ಸುರಕ್ಷಿತ ನಗರದಲ್ಲಿ 31ನೇ ಸ್ಥಾನ ಪಡೆದಿತ್ತು.
ಹೊಸ ವರ್ಷ ಕುಡ್ಲದ ಯುವಜನತೆಗೆ ಖಡಕ್ ರೂಲ್ಸ್ ಬಂತು
ಹೊಸ ವರ್ಷ ಕುಡ್ಲದ ಯುವಜನತೆಗೆ ಖಡಕ್ ರೂಲ್ಸ್ ಬಂತು 2020ರ ಹೊಸ ವರ್ಷದ ಆಚರಣೆ ಪ್ರಯುಕ್ತ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ.
ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸುವ ನಗರದ ಎಲ್ಲ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಪಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲೀಕರು/ ವ್ಯವಸ್ಥಾಪಕರು/ಆಡಳಿತ ವರ್ಗ ಕಡ್ಡಾಯವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಡಿ.24ರಂದು ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಿ, ಪೂರ್ವಾನುಮತಿ ಪಡೆದುಕೊಳ್ಳಬೇಕು ಎನ್ನುವುದು ಮಂಗಳೂರು ಪೊಲೀಸ್ ಕಮೀಷನರ್ ಡಾ. ಹರ್ಷ ಮಾಹಿತಿ ನೀಡಿದ್ದಾರೆ.
ಪೂರ್ವಾನುಮತಿ ಪಡೆಯದೆ ನೂತನ ವರ್ಷ ಆಚರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳಿಸಬೇಕು. ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸುವವರು ಸಂಬಂಧಪಟ್ಟ ಇಲಾಖೆಗಳಿಂದ ಪಡೆದ ಪರವಾನಗಿಯಲ್ಲಿ ನೀಡಿದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊಸ ವರ್ಷ ಆಚರಿಸುವವರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಅಂಥವರ ಬಗ್ಗೆ ನಿಗಾ ವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕಾರ್ಯಪಡೆ ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸಲಾಗಿರುವ ಹೊಸ ವರ್ಷಚರಣೆ ಕಾರ್ಯಕ್ರಮ ನೆಪದಲ್ಲಿ ಬಸ್ ತಂಗುದಾಣ, ಸಾರ್ವಜನಿಕ ಉದ್ಯಾನವನಗಳು, ಕ್ರೀಡಾಂಗಣ, ರೈಲ್ವೆ ಸ್ಟೇಶನ್ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ.
ವಿದ್ಯಾರ್ಥಿಗಳು ಹಾಗೂ ಯುವಕರು ಡಿ.31ರ ರಾತ್ರಿ ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವಾಹನಗಳನ್ನು ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು, ಬೊಬ್ಬೆ ಹಾಕುವುದು ಹಾಗೂ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಕೂಡ ಸಂಚಾರ ಪೆÇಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಪಡೆಯು ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಚಾಲನೆಯಲ್ಲಿರುತ್ತದೆ. ಕಾನೂನು ಉಲ್ಲಂಘಿಸುವ ಪ್ರಕರಣಗಳು ಕಂಡುಬಂದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ.
ಮಂಗಳೂರಿನಲ್ಲಿ ಗಾಂಧೀಜಿ ದೇವರು, ನಿತ್ಯವೂ ಪೂಜೆ
ಗರಡಿಯ ವಿವಿಧ ದೈವಗಳ ಹಾಗೆಯೆ ಗಾಂಧೀಜಿಯವರ ಪ್ರತಿಮೆಗೆ ಆರತಿ ಬೆಳಗಲಾಗುತ್ತದೆ, ಪೂಜೆ ಮಾಡಲಾಗುತ್ತಿದೆ. ದೈವಸ್ಥಾನಕ್ಕೆ ಬಂದ ಭಕ್ತರೂ ಗಾಂಧೀಜಿಯನ್ನು ದೇವರ ಸ್ಥಾನದಲ್ಲಿಯೇ ಇಟ್ಟು ನಮಿಸುತ್ತಾರೆ.
ಸತ್ಯವೇ ದೇವರು ಎಂದ ರಾಷ್ಟ್ರಪಿತ ಗಾಂಧೀಜಿಗೆ ಮಂಗಳೂರಿನ ದೈವಸ್ಥಾನದಲ್ಲಿ ನಿತ್ಯವೂ ತ್ರಿಕಾಲ ಪೂಜೆ ನಡೆಯುತ್ತಿದೆ. ಮಂಗಳೂರಿನ ಕಂಕನಾಡಿಯಲ್ಲಿರುವ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಗಾಂಧೀಜಿಯವರ ಶ್ವೇತ ವರ್ಣದ ವಿಗ್ರಹವನ್ನು 1948ರಲ್ಲಿಯೇ ಸ್ಥಾಪಿಸಲಾಗಿತ್ತು.
ಅಂದಿನಿಂದ ಇಂದಿನ ವರೆಗೆ ಗರಡಿಯ ವಿವಿಧ ದೈವಗಳ ಹಾಗೆಯೆ ಗಾಂಧೀಜಿಯವರ ಪ್ರತಿಮೆಗೆ ಆರತಿ ಬೆಳಗಲಾಗುತ್ತದೆ, ಪೂಜೆ ಮಾಡಲಾಗುತ್ತಿದೆ. ದೈವಸ್ಥಾನಕ್ಕೆ ಬಂದ ಭಕ್ತರೂ ಗಾಂಧೀಜಿಯನ್ನು ದೇವರ ಸ್ಥಾನದಲ್ಲಿಯೇ ಇಟ್ಟು ನಮಿಸುತ್ತಾರೆ. ಅನೇಕ ಯುವಕ ಯುವತಿಯರೂ ಸಹ ಗಾಂಧೀಜಿಯಿಂದ ಪ್ರೇರಣೆ ಪಡೆಯುವ ಸಲುವಾಗಿಯೇ ಆಗಾಗ ಈ ಮೂರ್ತಿಗೆ ನಮಿಸಿ ಹೋಗುತ್ತಾರೆ.