Tagged: mangalore

ಚಂದ್ರನ ಅಂಗಳದ ಸಾಹಸದಲ್ಲಿ ಕಾರ್ಲದ ವಿಜ್ಞಾನಿ

ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಡರ್ ನ ಸಾಹಸದಲ್ಲಿ‌ ಇಸ್ರೋದ ವಿಜ್ಞಾನಿಗಳ ಸಾಲಿನಲ್ಲಿ ಕಾರ್ಲದ ಮೂಲದ ವಿಜ್ಞಾನಿ ವೈ.ದೇವದಾಸ್ ಶೆಣೈ ಕೂಡ ಒಬ್ಬರು. ಅವರು ಸರಕಾರಿ ಶಾಲೆಯಲ್ಲಿ ಓದಿದವರು. ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿಕೊಂಡು ಈಗ ಇಸ್ರೋದ ವಿಜ್ಞಾನಿಗಳ ಸಾಲಿನಲ್ಲಿ ನಿಂತಿರೋದು ಹೆಮ್ಮೆಯ ವಿಚಾರ.

ಕುಡ್ಲದ ಫಸ್ಟ್ ಜೈವಿಕ ಇಂಧನದ ಸಿಟಿ ಬಸ್ !

ಕುಡ್ಲದ ಫಸ್ಟ್ ಜೈವಿಕ ಇಂಧನದ ಸಿಟಿ ಬಸ್ ! ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲಿ ಈಗಾಗಲೇ ಜೈವಿಕ ಇಂಧನದ ಬಸ್‌ಗಳು ಓಡಾಡುತ್ತಿದೆ. ಆದರೆ ಮೊದಲ ಬಾರಿಗೆ ಮಂಗಳೂರಿನ ಸಿಟಿ ಬಸ್‌ನಲ್ಲಿ ಜೈವಿಕ ಇಂಧನದ ಬಳಕೆಯ ಮೂಲಕ ಮಾಲಿನ್ಯತೆ, ಇಂಧನ ಉಳಿಕೆ ಹಾಗೂ ಹಣದ ಉಳಿತಾಯಕ್ಕೂ ಇದು ಸಹಕಾರಿಯಾಗಲಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್- ಮಂಗಳಾದೇವಿ ಕಡೆಗೆ ಓಡುವ ಸಿಟಿ ಬಸ್‌ನಲ್ಲಿ ಶೇ.೮೦ ಡಿಸೇಲ್ ಜತೆಗೆ ಶೇ.೨೦ ಜೈವಿಕ ಈಂಧನ ಬಳಕೆ ಮಾಡಲಾಗುತ್ತಿದೆ. ಮುಂದೆ ಇದರ ಪ್ರಮಾಣ ಜಾಸ್ತಿಯಾಗಲಿದೆ ಎನ್ನುವುದು ಮಂಗಳೂರು ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹೇಳುತ್ತಾರೆ. ಜೈವಿಕ ಇಂಧನಗಳೆಂದರೆ ಜೈವಿಕ ಎಥೆನಾಲ ಹಾಗೂ ಬಯೋ ಡೀಸೆಲ. ಎಥೆನಾಲ್‌ನ್ನು ಪೆಟ್ರೋಲ್ ನೊಂದಿಗೆ ಬೆರೆಸಿದರೆ, ಬಯೋ ಡೀಸೆಲ್‌ನ್ನು ಡೀಸೆಲ್‌ನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಎಥೆನಾಲ್ ವಾಹನ ಇಂಧನಕ್ಕೆ ಪೂರಕವಾಗಿ ಬಳಸಬಹುದಾದ ಇಂಧನವಾದರೆ, ಬಯೋ ಡೀಸೆಲ ಪೆಟ್ರೋಲಿಯಂಗೆ ಪರ್ಯಾಯವಾಗಿ ಬಳಸಬಹುದಾದ ಇಂಧನ. ಬಯೋ ಎಥೆನಾಲ ಯುಎಸ್‌ಎ ಮತ್ತು ಬ್ರೆಜಿಲ್‌ನಲ್ಲಿ ಹೆಚ್ಚು ಬಳಕೆಯಾಗುತ್ತದೆ. ಸಕ್ಕರೆ ಅಂಶವಿರುವ ಸಸ್ಯೋತ್ಪನ್ನ ಕಬ್ಬು, ಕಬ್ಬಿನ ತ್ಯಾಜ್ಯವಾದ ಕಾಕಂಬಿ, ಜೋಳ, ಬೀಟ್‌ರೂಟ್, ಮೆಕ್ಕೆ ಜೋಳ, ತಾಳೆ ಮೊದಲಾದವುಗಳಿಂದ ಎಥೆನಾಲ್ ಉತ್ಪಾದನೆ ಮಾಡಬಹುದಾಗಿದೆ. ನಗರದ ಸಿಟಿ ಬಸ್‌ಗಳಿಗೆ ಉಪಯೋಗಿಸುವ ಬಯೋ ಡೀಸೆಲ್ ಹೋಟೆಲ್ ಗಳಲ್ಲಿ ಬಳಕೆ ಮಾಡಿದ ಅಡುಗೆ ಅನಿಲದಿಂದ ತಯಾರಿಸಲಾಗುತ್ತಿದೆ. ನಿಟ್ಟೆಯ ಎನ್‌ಎಂಎಎಂಐಟಿ ಸಂಸ್ಥೆಯು ಬಿಆರ್‌ಐಡಿಸಿ ವಿಭಾಗದಲ್ಲಿ ಬಯೋ ಡೀಸೆಲ್ ತಯಾರಿಸುತ್ತಿದೆ. ಈ ಯುನಿಟ್‌ನಲ್ಲಿ ತಿಂಗಳಿಗೆ 600 ರಿಂದ 700 ಲೀ. ಬಯೋ ಡೀಸೆಲ್ ತಯಾರಿಸಲಾಗುತ್ತಿದೆ.

ಪೋಲಿಸ್ ಠಾಣೆಯಲ್ಲಿ ನಡೆಯಿತು ಸೀಮಂತ !

ತುಳುನಾಡ ಕಟ್ಟು ಕಟ್ಟಳೆಗಳಲ್ಲಿ ಸೀಮಂತ ಕೂಡಾ ಒಂದು. ಮದುವೆಯಾದ ಹೆಣ್ಮಗಳು ಗರ್ಭಿಣಿಯಾದ ಏಳನೇ ತಿಂಗಳಲ್ಲಿ ಸೀಮಂತ ಹಾಕುವ ಕ್ರಮವಿದೆ.

ಇಂತಹುದೇ ಒಂದು ಸೀಮಂತ ವಿಟ್ಲ ಪೊಲೀಸ್ ಠಾಣೆಯಲ್ಲಿ ಅದ್ಧೂರಿಯಾಗಿಯೇ ನಡೆಯಿತು. ಅಂದ ಹಾಗೆ ಸೀಮಂತದ ನಾಯಕಿ ಬೇರಾರೂ ಅಲ್ಲ..! ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷದಿಂದ ಹೋಮ್ ಗಾರ್ಡ್ ಸಿಬ್ಬಂದಿ ಆಗಿರುವ ಪ್ರಸ್ತುತ ತುಂಬು ಗರ್ಬಿಣಿ ಶ್ರೀಮತಿ ಮಲ್ಲಿಕಾ ಅವರು.

ಕೊಡಂಗಾಯಿ ಪಳ್ಳಿಗದ್ದೆ ಕೊರಗಪ್ಪ ಗೌಡ ಇಂದಿರಾ ದಂಪತಿ ಪುತ್ರಿಯಾಗಿರುವ ಮಲ್ಲಿಕಾ ಅವರನ್ನು ಪುತ್ತೂರು ಕೆಮ್ಮಾಯಿಯ ಕೇಶವರಿಗೆ ವಿವಾಹ ಮಾಡಿಕೊಡಲಾಗಿತ್ತು. ಗಂಡನ ಮನೆಯಲ್ಲಿ ಕಳೆದ ತಿಂಗಳೇ ಸೀಮಂತವಾಗಿತ್ತು. ಆದರೆ ವಿಟ್ಲ ಪೊಲೀಸರು ತುಂಬು ಗರ್ಬಿಣಿ ಮಲ್ಲಿಕಾರಿಗೆ ಠಾಣೆಯಲ್ಲೇ ಸೀಮಂತ ಮಾಡುವ ಮೂಲಕ ವೈಶಿಷ್ಟ್ಯತೆ ಮೆರೆದಿದ್ದಾರೆ.

ವಿಟ್ಲ ಠಾಣಾಧಿಕಾರಿ ಯಲ್ಲಪ್ಪ ಹಾಗೂ ಸಿಬ್ಬಂದಿಗಳು ಮಲ್ಲಿಕಾ ಅವರಿಗೆ ಅದ್ದೂರಿ ಸೀಮಂತ ಮಾಡಿಸಿದರು. ಮಹಿಳಾ ಪೊಲೀಸರು ಹಣೆಗೆ ಕುಂಕುಮದ ತಿಲಕವಿಟ್ಟು ತಲೆಗೆ ಚೆಂಡು ಮಲ್ಲಿಗೆ ತೊಡಿಸಿದರು. ಹೂವು ಸೀರೆ ಕೊಟ್ಟರು. ಎಲೆ ಅಡಿಕೆಯನ್ನು ಕೈಗೆ ನೀಡಿದರು. ಸಿಹಿ ವಿತರಿಸಿದರು. ಗೌಜಿಯ ಸೀಮಂತಕ್ಕೆ ಠಾಣೆ ಸಾಕ್ಷಿಯಾಯಿತು.

ಚಿತ್ರ,ಮಾಹಿತಿ: ರಶೀದ್ ವಿಟ್ಲ

ವಿಶ್ವ ಚಾಂಪಿಯನ್ ಶಿಪ್ ತಂಡದಲ್ಲಿ ಕುಡ್ಲದ ಪೊಣ್ಣು !

ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಭಾರತ ತಂಡದ 25 ಸದಸ್ಯರಲ್ಲಿ ಕುಡ್ಲದ ಓಟಗಾರ್ತಿ ಎಂ.ಆರ್.ಪೂವಮ್ಮ ಆಯ್ಕೆಯಾಗಿದ್ದಾರೆ. ಈಗಾಗಲೇ ಹಲವು ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ಪೂವಮ್ಮ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕ್ರೀಡಾ ಬದುಕು ಆರಂಭಿಸಿದವರು.

ಪಿಲಿಕುಳದ ‘ರಾಣಿ’ಗೆ ಐದು ಮರಿಗಳು !

ಪಿಲಿಕುಳದ ‘ರಾಣಿ’ಗೆ ಐದು ಮರಿಗಳು ! ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿರುವ ೮ ವರ್ಷದ ರಾಣಿ ಎನ್ನುವ ಹೆಣ್ಣು ಹುಲಿ ಮುದ್ದಾದ 3 ಹೆಣ್ಣು ಹಾಗೂ 2 ಗಂಡು ಮರಿಗಳಿಗೆ ಜನ್ಮ ನೀಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ರಾಣಿ ಮರಿ ಹಾಕಿದ್ದು, ಎಲ್ಲ ಮರಿಗಳು ಆರೋಗ್ಯವಾಗಿವೆ. ಅವುಗಳಿಗೆ ಸೋಂಕು ಉಂಟಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದ್ದು, ತಾಯಿ-ಮರಿಗಳನ್ನು ಬೋನಿನಲ್ಲಿಡಲಾಗಿದೆ. ಸದ್ಯ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ. 2-3 ತಿಂಗಳ ಬಳಿಕ ಅವುಗಳಿಗೆ ಚುಚ್ಚು ಮದ್ದು- ಲಸಿಕೆ ನೀಡಿ ಆರೋಗ್ಯ ಪರಿಶೀಲಿಸಿದ ಬೋನಿನಿಂದ ಹೊರ ಬಿಡಲಾಗುವುದು ಎಂದು ಪಿಲಿಕುಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಣಿಯನ್ನು ಮೂರು ವರ್ಷಗಳ ಹಿಂದೆ ಬನ್ನೇರುಘಟ್ಟದಿಂದ ತರಲಾಗಿತ್ತು. ಸದ್ಯ ಮರಿಗಳು ತಾಯಿಯ ಹಾಲನ್ನಷ್ಟೇ ಸೇವಿಸುತ್ತಿದ್ದು, ಕೆಲವೇ ದಿನಗಳಲ್ಲಿ ಮಾಂಸಾಹಾರ ನೀಡಲಾ ಗುತ್ತದೆ. 3 ವರ್ಷಗಳ ಬಳಿಕ ಮರಿಗಳನ್ನು ಬೇರೆ ಮೃಗಾಲಯಗಳಿಗೆ ಕಳು ಹಿಸುವ ಯೋಚನೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.